ಸೋಲೆ ಇಲ್ಲ
ಯುದ್ಧಕಾಂಡ ಹಂಸಲೇಖ
ಹಂಸಲೇಖ
ಸೋಲೆ ಇಲ್ಲ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲಲಲ ಲಲಲ ಲಲಲ || ಪ ||
ಹೂವು ಮುಳ್ಳು ಜೋಡಿಯಾಗಿ ಬಾಳೊದೇಕೆ ಹೇಳು
ಬೇರೆ ಮಾಡೊ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನವೊಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು || ಅನು ||
ಮೊಡ ಕವಿದ ಆ ಚಂದ್ರ ಹೊರಗೆ ಬರದೆ ಇರನು
ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೇ ದೀಪ ಶೌರ್ಯ ಅದರ ರೂಪ
ಸತ್ಯ ನಮಗೆ ದಾರಿ ಸುಳ್ಳೆ ನಮಗೆ ವೈರಿ
ಹಾಡುವ ಈಗ ಜೀವನ ರಾಗ ಲಲಲ ಲಲಲ ಲಲಲ || ೧ ||
ಬೆಳ್ಳಿ ರಥದ ಆ ಸೂರ್ಯ ದಿನವೂ ನಗುತಾ ಬರುವ
ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ ಹೃದಯ ಯಜ್ಞಕುಂಡ
ಸಿಡಿಯೆ ಅಗ್ನಿ ಜ್ವಾಲೆ ಕೊಡಿಸೆ ವಿಜಯ ಮಾಲೆ
ಹಾಡುವ ಈಗ ಜೀವನ ರಾಗ ಲಲಲ ಲಲಲ ಲಲಲ|| ೨ ||
ಯುದ್ಧಕಾಂಡ
ಚಿತ್ರ ನೋಡಿ